untitled
 

::ಬೂಬಣ್ಣನ ರಗಳೆಗಳು

   
 

Pradeepzone>Funzone>Jokes>Boobanna
» Scientific » Q & A » Boobanna's Jokes » Funny Jokes » Silly Jokes » Not So Funny » Kannada Jokes
»ಬೂಬಣ್ಣನ ರಗಳೆಗಳು » boobanna's adventures in kannada


  ಬೂಬಣ್ಣನ ರಗಳೆಗಳು » [ ಪುಟ-೨ ]

»»
ಬೂಬಣ್ಣ: ಮೂರ್ಖತನದ ಪರಮಾವಧಿ ಯಾವುದು?
ರಾಮಣ್ಣ: ಹಂ... ನಿನ್ನ ಭಾವಚಿತ್ರ ನೋಡು, ತಿಳಿಯುತ್ತೆ!

»»
ಸಂತ: ದೇವರೆಲ್ಲಿರುವನು?....
ಚಿಕ್ಕ ಬೂಬಣ್ಣ: ನಮ್ಮ ಶೌಚಾಲಯದಲ್ಲಿ, ಸ್ವಾಮಿ!
ಸಂತ: ಅಯ್ಯಯ್ಯೋ! ಯಾರದು? ಯಾರಂದರು?
ಚಿಕ್ಕ ಬೂಬಣ್ಣ: ನಾನಂದೆ, ಸ್ವಾಮೀ! ನಮ್ಮಪ್ಪ ದಿನಾ ಬೆಳಿಗ್ಗೆ ಶೌಚಾಲಯದ ಹೋರಗೆ ನಿಂತು ಬೊಬ್ಬಿಡುತ್ತಾರೆ, "ಓ ದೇವರೇ! ನೀನಿನ್ನೂ ಇಲ್ಲಿದ್ದೀಯಾ.."

»»
ಬೂಬಣ್ಣ: ನಾನೊಬ್ಬಳನ್ನು ಪ್ರೀತಿಸುತಿರುವೆ. ಅವಳಿಗದನ್ನು ತಿಳಿಸಲು ಸೂಕ್ತವಾದ ಜಾಗ ಯಾವುದು?
ರಾಮಣ್ಣ: ದೇವಸ್ತಾನದ ಒಳಗೆ..
ಬೂಬಣ್ಣ: ದೇವಸ್ತಾನದೊಳಗೇ?! ಯಾಕೆ..
ರಾಮಣ್ಣ: ಯಾಕೆಂದರೆ, ಅಲ್ಲಿ ಅವಳು ಯಾವುದೇ ಚಪ್ಪಲಿ, ಪಾದರಕ್ಷೆಯನ್ನು ಹಾಕಿಕೊಂಡಿರುವುದಿಲ್ಲ..

»» ಬೂಬಣ್ಣ ಹೊಸಾ ಮೋಟಾರ್ ಬೈಕು ಕೊಂಡಾಗ ರಾಮಣ್ಣನನ್ನು ತಿರುಗಾಡಲೆಂದು ಅದರಲ್ಲಿ ಕರೆದೊಯ್ಯುತ್ತಾನೆ...
ರಾಮಣ್ಣ(ಬೊಬ್ಬಿಡುತ್ತಾ): ಓ ಮೂರ್ಖ! ಇಷ್ಟು ವೇಗವಾಗಿ ಯಾಕೆ ಗಾಡಿ ಓಡಿಸುತ್ತಿದ್ದೀ?! ನಮ್ಮಿಬ್ಬರ ತಿಥಿ ಮಾಡಿಸಲಾ?! ನನಗೆ ಭಯವಾಗ್ತಾ ಇದೆ!
ಬೂಬಣ್ಣ: ಯಾಕೆ ಬೊಬ್ಬೆ ಹಾಕ್ತಾ ಇದ್ದೀ?! ಭಯವಾದ್ರೆ ನನ್ನ ಹಾಗೆ ಕಣ್ಣು ಮುಚ್ಚಿಕೋ..

»» ಬೂಬಣ್ಣ ಒಂದು ಕಾರು ಕೊಂಡಾಗ ತನ್ನ ಮಿತ್ರರನ್ನು ಅದರಲ್ಲಿ ತಿರುಗಾಡಲು ಕರೆದೊಯ್ಯುತ್ತಾನೆ.. ಅದರಲ್ಲಿ ತಿರುಗಾಡಿ ಹಿಂತಿರುಗಿದ ಮೇಲೆ...
ಬೂಬಣ್ಣ: ಹೇಗಿತ್ತು? ನನ್ನ ಕಾರು!!
ಭೀಮಣ್ಣ ಹಾಗೂ ಚೋಮಣ್ಣ: ಭಲೇ! ಭಲೇ! ಇಂತಹಾ ಕಾರು ಜಗತ್ತಿನಲ್ಲಿ ಇನ್ನೊಂದಿಲ್ಲ......
ಬೂಬಣ್ಣ: ಅದೇ, ನನ್ನ ಕಾರಿನ ವಿಶೇಷತೆ!
ರಾಮಣ್ಣ: ಹೌದಪ್ಪಾ! ಅದನ್ನೇ ಅವರೂ ಹೇಳಲಿಕ್ಕಿದ್ರು... ತನ್ನ ಹಾರ್ನ್ ಬಿಟ್ಟು ಬೇರೆಲ್ಲಾ ಭಾಗಗಳೂ ಸದ್ದು ಮಾಡುವ ಕಾರು ಜಗತ್ತಿನಲ್ಲಿ ಇದೊಂದೇ....

»»
ಆಧ್ಯಾಪಕಿ:
ಬೂಬಣ್ಣ, ಕಾಕತಾಳೀಯತೆಗೊಂದು ಉದಾಹರಣೆ ಕೊಡು..
ಚಿಕ್ಕ ಬೂಬಣ್ಣ: ನನ್ನ ಅಪ್ಪ, ಅಮ್ಮ ಇಬ್ಬರೂ ಒಂದೇ ದಿನ ಮದುವೆಯಾದರು..

»»
ಬೂಬಣ್ಣನ ಅಪ್ಪ: ನಿನಗೇನನ್ನೂ ಕಲಿಸಲು ಅಸಾಧ್ಯವೆಂದು ನಿನ್ನ ಅಧ್ಯಾಪಕಿಯು ಹೇಳುತ್ತಾಳೆ!
ಚಿಕ್ಕ ಬೂಬಣ್ಣ: ಅದಕ್ಕೇ ನಾನು ಯವಾಗಲೂ ಹೇಳೋದು, ಅವಳು ಯಾವುದೇ ಪ್ರಯೋಜನಕ್ಕಿಲ್ಲದ ಅಧ್ಯಾಪಕಿಯೆಂದು!

»»
ಚಿಕ್ಕ ಬೂಬಣ್ಣ: ಅಪ್ಪಾ, ಇವತ್ತು ಅಧ್ಯಾಪಕಿಯು, ಮುಂದೆ ನಿನ್ನ ಯಾವುದಾದರೂ ತಮ್ಮ, ತಂಗಿಯವರು ಶಾಲೆಗೆ ಬರಲಿರುವರೇ ಎಂದು ಕೇಳಿದ್ರು..
ಬೂಬಣ್ಣನ ಅಪ್ಪ: ಓಹ್! ಓಳ್ಳೆಯ ಅಧ್ಯಾಪಕಿಯರು. ನೀನು ನಮ್ಮೊಬ್ಬನೇ ಮಗುವೆಂದು ತಿಳಿದಾಗ ಏನಂದರು?
ಚಿಕ್ಕ ಬೂಬಣ್ಣ: ಹೆಚ್ಚೇನೂ ಇಲ್ಲಾ.. 'ಅಬ್ಬಾ! ಬಚಾವಾದೆ!', ಎಂದರು.. ಅಷ್ಟೇ..

»» ಒಮ್ಮೆ ಬೂಬಣ್ಣ ಹಾಗೂ ಮಿತ್ರರು ಪ್ರವಾಸಕ್ಕೆ ಹೋದಾಗ ಮೈಸೂರು ಅರಮನೆಗೆ ಭೇಟಿ ಕೊಟ್ಟರು.. ಬೂಬಣ್ಣನಿಗೆ ಬಹಳ ಸುಸ್ತಾಗಿತ್ತು ಎಂದು ಒಂದು ಕಡೆ ಅರಾಮಿಸಲು ಕುಳಿತನು..
ಕಾವಲುಗಾರ: ಓಯ್! ಟಿಪ್ಪು ಸುಲ್ತಾನನ ಸಿಂಹಾಸನದ ಮೇಲೆ ಯಾಕೆ ಕುಳಿತಿದ್ದೀ?! ಕೂಡಲೇ ಕೆಳಗೆ ಇಳಿ!
ಬೂಬಣ್ಣ: ಆಯ್ತಪ್ಪಾ! ಯಾಕೆ ಹಾಗೆ ಕಿರುಚುತ್ತಾ ಇದ್ದೀ? ಅವನು ಬಂದಾಗ ಇಳಿಯುತ್ತೇನೆ. ನನಗೆ ಭಾರೀ ಸುಸ್ತಾಗಿದೆ, ಹೋಗಿ ಬೇರೆ ಯಾರದಾದ್ರೂ ತಲೇ ತಿನ್ನು...

»»
ರಾಮಣ್ಣ: ಹೇ.. ಕೊಡೆಯಲ್ಲಿ ತೂತು ಯಾಕೆ ಮಾಡಿದೆ?!
ಬೂಬಣ್ಣ: ಅಯ್ಯೋ ಮೂರ್ಖಾ! ಮತ್ತೆ ಮಳೆ ನಿಂತು ಹೋದರೆ ನಂಗೆ ಹೇಗೆ ಗೊತ್ತಗುತ್ತೆ?

»» ಒಮ್ಮೆ ಬೂಬಣ್ಣ ಟೆಂಪೋ ಓಡಿಸುವಾಗ, ಅಪಘಾತವಾಗುತ್ತದೆ..
ಆರಕ್ಷಕ (ಪೋಲೀಸ್): ಏಯ್! ಈ ಅಪಘಾತ ಹೇಗಾಯಿತು? ಇದಕ್ಕೆ ಕಾರಣ ಯಾರು?
ಬೂಬಣ್ಣ: ಗೊತ್ತಿಲ್ಲ ಸ್ವಾಮಿ! ಆಗ ನಾನು ಒಳ್ಳೇ ನಿದ್ರೆಯಲ್ಲಿದ್ದೆ..

»» ಅಂದು ಬೂಬಣ್ಣ ಮೊದಲ ಸಲ ವಿಮಾನ ಏರಿದ್ದನು.. ಆದ್ರೆ, ವಿಮಾನ ಪ್ರಯಾಣದ ಬಗ್ಗೆ ಅದರಲ್ಲಿ ಮೊದಲೇ ಪ್ರಯಾಣ ಮಾಡಿದವರ ಬಳಿ ಕೇಳಿ ತಿಳಿದುಕೊಂಡಿದ್ದನು..
ಬೂಬಣ್ಣ: ವಾಹ್! ಅವರೆಲ್ಲಾ ಹೇಳಿದ್ದು ನಿಜ! ಇಲ್ಲಿಂದ ಜನರು ನಿಜಕ್ಕೂ ಇರುವೆಗಳ ಹಾಗೆ ಕಾಣಿಸುತ್ತಿದ್ದಾರೆ...
ಗಗನ ಸಖಿ(air hostess): ಸಾರ್! ಅವುಗಳು ನಿಜವಾದ ಇರುವೆಗಳೇ! ವಿಮಾನ ಇನ್ನೂ ಹಾರಲು ಪ್ರಾರಂಭಿಸಿಲ್ಲ...

»» ಒಮ್ಮೆ ಬೂಬಣ್ಣ ಹಾಗೂ ಚೋಮಣ್ಣ ಒಂದು ಉದ್ಯಾನವನಕ್ಕೆ ಹೋಗುತ್ತಾರೆ. ಅಲ್ಲಿ ಕೊಳದಲ್ಲಿ ಮೀನುಗಳು ಈಜಾಡುತ್ತಿರುತ್ತವೆ..
ಚೋಮಣ್ಣ: ಬೂಬಣ್ಣ! ಕೊಳಕ್ಕೆ ಬೆಂಕಿ ಬಿದ್ದರೆ ಅದರಲ್ಲಿರುವ ಮೀನುಗಳ ಪಾಡೇನಾಗುತ್ತದೆ?
ಬೂಬಣ್ಣ: ಏನಾಗಲ್ಲ! ಅವುಗಳು ಪಕ್ಕದಲ್ಲಿರುವ ಮರಗಳನ್ನೇರಿ ಕುಳಿತುಕೊಳ್ಳುತ್ತವೆ ಅಷ್ಟೇ..

»» ಒಮ್ಮೆ ಬೂಬಣ್ಣ ಹಾಗೂ ಮಿತ್ರರು ಪ್ರವಾಸಕ್ಕೆ ಹೋಗುತ್ತರೆ..
ರಾಮಣ್ಣ: ಅಲ್ನೋಡು! ಆ ಪುರಾತನ ದೇವಸ್ತಾನ ಸುಮಾರು ೪೦೦೦ (4000)(ನಾಲ್ಕು ಸಾವಿರ) ವರ್ಷ ಹಳೆಯದು..
ಬೂಬಣ್ಣ: ಸುಮ್ನೆ ಬೋಗಳೆ ಬಿಡಬೇಡ! ಈಗಿನ್ನೂ ೨೦೦೭ (2007)!

»» ಬೂಬಣ್ಣ ಹೇಳಿದನು..
ನಾನು ಯಾವತ್ತೂ ಮದುವೆಯಾಗುವುದಿಲ್ಲ! ಹಾಗೂ ನನ್ನ ಮಕ್ಕಳಿಗೂ ಅದನ್ನೇ ಬೋಧಿಸುವೆ..





Pradeepzone Home Add to favorites Sitemap Your Comments Your comments/feedback The Pradeepzone Blog Back to previous page Refresh this page Top of the page


»Disclaimer

Boobanna's declaration: I'll never marry in my life and I'll give the same advice to my children also.
 

 
Hey!! Do you know a hilarious joke you want to share with other visitor's?? Then, you can do so by
Clicking below!!





» Scientific Jokes » Q & A » Boobanna's Jokes » Funny Jokes » Silly Jokes » Not So Funny » Kannada Jokes
Home  |   Sitemap   |   Contact us   |   Feedback   |   Add to favourites  |   Guestbook   |    Refresh    |    Help&Support   |   Disclaimer  |   Terms of use  |   Top

P
RADEEP

©2008 Pradeep Features.
Best viewed on resolution 800 x 600 in Internet Explorer 6.0 or above
Now, also compatible with Firefox 1.5.0.6 or above!
 

Report Content · · Web Hosting · Blog · Guestbooks · Message Forums · Mailing Lists
Easiest Website Builder ever! · Build your own toolbar · Free Talking Character · Email Marketing
powered by a free webtools company bravenet.com