ಕನ್ನಡಿಗರೇ!! ಕನ್ನಡ ವಲಯಕ್ಕೆ ನಿಮಗೆ
ಸುಸ್ವಾಗತ!!. ಇಲ್ಲಿ ಹಲವಾರು ಕನ್ನಡ ಕವನಗಳು ಲಭ್ಯವಾಗಲಿವೆ. ಈ ಭಾಗವು ಹೊಸತಾಗಿ ಶುರುವಾದ್ದರಿಂದ, ಈಗ ಇಲ್ಲಿ ಕೆಲವು
ಲೇಖನಗಳು ಮಾತ್ರ ಲಭ್ಯವಿವೆ. ಆದರೆ, ಬಲು ಬೇಗನೆ ಈ ಕನ್ನಡ ವಲಯವು
ಸಂಪೂರ್ಣವಾಗಿ ಹೊರಹೊಮ್ಮಲಿದೆ!..
:: ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು
ಕಳುಹಿಸಿರಿ..
Note: Cannot read the Kannada text? Normally, your browser automatically detects the page encoding. But,
if you are unable to read in Kannada on this page, try the below option: »Internet Explorer(6+) users, in the Toolbar, Go to: View>Encoding> , and
select Unicode (UTF-8). »Firefox(3+) Users, in the Toolbar, Go to: View>Character
Encoding> , and select Unicode (UTF-8).
If this doesn't solve the problem, please give us
Your Feedback Note:
This section contains Kannada text.
Without proper
rendering support, you may see question marks, boxes, or other symbols
instead of Kannada characters.
ಕವನಗಳು::
»» ಕಲ್ಲರೆ
ಮಹೇಶರ ಕವನಗಳು [5]»
::ಅಪ್ಸರಕೊಂಡ::
ನೆಲದೊಳಗಿನ ಜಲ-
ದಲ್ಲಿ ನೆಲ ಕಂಡರೂ
ಆಳ ಲೆಕ್ಕಕ್ಕೆ ಸಿಗದು.
ಧಾರೆ ಧಾರೆಯಾಗಿ ಹರಿದು
ಧುಮುಕಿ ಜಲಪಾತವಾಗಿ
ಹರಿದೂ ಹರಿಯದಂತೆ-
ಸಾಗುವ ಕೋಡಿಯದು.
ಕಡಲು ಸೆರುವ
ನಿಮಿಷದವರೆಗೂ ಸಿಹಿ
ನೀರು ನೀದುವ ಅಧ್ಬುತ-
ಅಪ್ಸ್ರರೆಯರು ಮಿಂದ ನೀರಿದು
ಹೆಸರು ಅಪ್ಸರಕೊಂಡ.
_ _ _
::ನನ್ನವನು::
ನಿನ್ನೆ ಸಂಜೆಯ ಕೋಪ ಇನ್ನೂ ಆರಿರಲಿಲ್ಲ.
ಬೆಳಿಗ್ಗೆಯೇ ತೀರಿಸಬೇಕೆಂದುಕೊಂಡೆ
ಸೂರ್ಯ ಏಳುವ ಮೊದಲೇ..
ನನಗಿಂತ ಮೊದಲೇ ಮಾತನಾಡಿದ-
ಜೀವ ನಾನಿನ್ನೂ ನಿದ್ದೆ ಮಾಡಿಲ್ಲ-
ನಿನ್ನದೇ ನೆನಪಿನಲ್ಲಿ ಚಂದ್ರನೊಡನೆ
ಮುಳುಗುತ್ತಿದ್ದೇನೆ ಅನ್ನುವುದೇ??
ನಿನ್ನೆ ಸಂಜೆಯ ಮಾತ ಮರೆತುಬಿಡು ಬೇಗ
ಪ್ರೀತಿಯಿಂದದಿದ್ದದು. ದ್ವೆಷದಿಂದಲ್ಲ
ಅದರಿಂದಾಗೆ ನಿದ್ದೆಯಿಲ್ಲ - ಕನಸಿಲ್ಲ.
ಮನಸೆಲ್ಲ ನೀನೆ ಅಂದ.
ಅದೆಂಥ ಹುಡುಗನಿವ?
ಮಾತನಾಡಲೂ ಅವಕಾಶ ಇಲ್ಲದಂತೆ
ಮತ್ತೆ ಮತ್ತೆ ತನ್ನೆಡೆಗೆ ಸೆಳೆಯುತ್ತಾನೆ.
ನಾನೂ ಹಾಗೆ. ಮತ್ತೆ ಮತ್ತೆ ಅವನ ಜೊತೆ.
ಎಷ್ಟೆಂದರೂ ನನ್ನವನಲ್ಲವೇ.
_ _ _
::ಊಟ::
ಕಣ್ಣ ಮುಂದಿನ ಕುರುಚಲು
ಬೆಟ್ಟದ ಸೊಪ್ಪು-ಸದೆಗಳ
ನಡುವೆ ಕುರಿ ಮಂದೆಯ
ಹಬ್ಬದೂಟ.
ಕಂಬಳಿ ಕುರಬರ ಹುಡುಗನ
ಬೆತ್ತದ ಜೊತೆಗೊಂದು -
ಕರಿ ನಾಯಿ ಮರಿ
ಕಣ್ಣಲ್ಲಿ ಮಾಂಸದ ಆಸೆ.
ಮಂದೆಯ ಮುಂದೆಯೇ
ಮಾಲೀಕನ ಮಾತು.
ಕಟುಕರವನ ಒಡೆಯನಂತಿರುವ
ದಲ್ಲಾಳಿಯ ಲೆಕ್ಕಾಚಾರ.
ತಿನ್ನುವುದೇ ಕಾಯಕ ಅಂದುಕೊಂಡಿರುವ
ಕುರಿಗಳಿಗೆಂಥ ಗೊತ್ತು??
ತಾನು ಸೊಪ್ಪು ತಿನ್ನುವಂತೆ
ತನ್ನನ್ನು ತಿನ್ನುವವ
ಮಚ್ಚು ಹಿಡಿದವನ ಮುಂದೆ
ಹಸಿದು ನಿಂತಿರುವುದು.
_ _ _
::ಮತ್ತದೇ ನೆನಪು …::
ಮುಂಜಾನೆ ಮಂಜು, ಮಬ್ಬಿದೀ ಬೆಳಕು
ಮತ್ತದೇ ಬಿರುಬಿಸಿಲು
ಹರಿದು ಹಂಚಿದ ಕನಸು, ನಿಂತು ನಿಲ್ಲದ ಮನಸು
ಮತ್ತದೇ ಬಿರುಗಾಳಿ
ಕಂಡು ಕಾಣದ ಕಿರಣ, ಬರದೆ ಬಂದಿಹ ಸ್ಮರಣೆ
ಮತ್ತದೇ ಮರು ನೆನಪು
ಎಲ್ಲ ಕಿರಣದ ನಡುವೆ ಬಲ್ಲ ಮರಣದ ಆಟ
ಮತ್ತದೇ ನರಳಾಟ
ನಿಂತು ನಿಲ್ಲದ ಉಸಿರು, ಬಯಸದೀ ಹಸಿ ಬಸಿರು
ಮತ್ತದೇ ಪರದಾಟ
ಕಾದು ಕಾಡುವ ವರುಷ, ಮಸುಕಿದೀ ಪ್ರತಿದಿವಸ
ಮತ್ತದೇ ಪ್ರತಿ ನಿಮಿಷ
ತಂಪು ನೆರಳಿನ ಒಳಗೂ ಕಂಪು ಸೂಸದ ಕೂಗು
ಮತ್ತದೇ ಹೊಸ ಮರಣ
ಹಗಲು ಹಾದಿದೆ ಹರೆಯ ,ಸಂಜೆ ಕಾಣದು ಸನಿಹ
ಮತ್ತದೇ ಕಹಿ ರಾತ್ರಿ
ಹಾಡಲಾರದ ಹಾಡು, ಬರೆಯಲಾರದ ಬರಹ
ಮತ್ತದೇ ಹಣೆಬರಹ
_ _ _
::ಹಾಗೆ ಒಂದು ಮಾತು..:: ಪರಿವರ್ತನೆ:
ವರ್ತನೆಯ ಪರಿ
ಪರಿ-ವರ್ತನೆಯ
ಮೂಲ
Note: Cannot read the Kannada text? Normally, your browser automatically detects the page encoding. But,
if you are unable to read in Kannada on this page, try the below options:
»Internet Explorer(6+) users, in the Toolbar, Go to: View>Encoding> , and
select Unicode (UTF-8). »Firefox(3+) Users, in the Toolbar, Go to: View>Character
Encoding> , and select Unicode (UTF-8).
If this doesn't solve the problem, please give us
Your Feedback
Note:
This section contains Kannada text.
Without proper
rendering support, you may see question marks, boxes, or other symbols
instead of Kannada characters.
Please Note: This section contains External Links
that lead to External Web Sites
We provide you with these links to external sites just for your convenience
or for an attribution
and we are not associated or affiliated with these
sites in any way and have
no control over these sites and their content,
and we neither endorse these sites nor do they endorse ours, as in the
Terms of Use for this site.
»»Boobanna falls in love with a nurse.
He finally writes a love letter to her: "I love u sister." »»
Ramanna: I will catch a bus
home from statebank..
Boobanna: How can you?! Buses are
too big and heavy for you to catch!